ಭುವನೇಶ್ವರ್ ಕುಮಾರ್ ವಿವಾದದಿಂದ ಎಚ್ಚೆತ್ತುಕೊಂಡ ಬಿಸಿಸಿಐ, ಎನ್ ಸಿಎ ಮೇಲೆ ಹದ್ದಿನಗಣ್ಣು

ಮಂಗಳವಾರ, 17 ಡಿಸೆಂಬರ್ 2019 (10:38 IST)
ಬೆಂಗಳೂರು: ವೇಗಿ ಭುವನೇಶ್ವರ್ ಕುಮಾರ್ ಪದೇ ಪದೇ ಗಾಯಗೊಂಡ ಪ್ರಕರಣದಿಂದಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಕೇಂದ್ರದ ಕುರಿತು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಬಿಸಿಸಿಐ ಇದರ ಬಗ್ಗೆ ಗಮನಹರಿಸಲು ಮುಂದಾಗಿದೆ.


ಭುವಿ ಹರ್ನಿಯಾಗೆ ತುತ್ತಾಗಿರುವುದನ್ನು ಪತ್ತೆ ಮಾಡದ ಎನ್ ಸಿಎ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಎನ್ ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂಬ ವರದಿಯಾಗಿತ್ತು.

ಇದೆಲ್ಲದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭುವನೇಶ್ವರ್ ಕುಮಾರ್ ವೈದ್ಯಕೀಯ ಪರೀಕ್ಷೆಗಳ ವರದಿ ಪರಿಶೀಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಎನ್ ಸಿಎ ಕಾರ್ಯವೈಖರಿಯ ಬಗ್ಗೆಯೂ ವಿಚಾರಣೆ ನಡೆಸಲಿದ್ದಾರೆ. ಈ ಮೂಲಕ ಗಾಯಗೊಂಡ ಕ್ರಿಕೆಟಿಗರಿಗೆ ಪುನಶ್ಚೇತನ ನೀಡುವ ಎನ್ ಸಿಎಗೇ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ