ರೂಲ್ಸ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಗರಂ

ಶನಿವಾರ, 26 ಆಗಸ್ಟ್ 2023 (08:20 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮುನ್ನ ಬೆಂಗಳೂರಿನಲ್ಲಿ ಕಡ್ಡಾಯ ಯೋ ಯೋ ಟೆಸ್ಟ್ ಗೆ ಗುರಿಯಾಗಿದ್ದರು.

ಸಾಮಾನ್ಯವಾಗಿ ಯೋ ಯೋ ಟೆಸ್ಟ್ ನ ಫಲಿತಾಂಶವನ್ನು ಆಟಗಾರರು ಬಹಿರಂಗವಾಗಿ ಪ್ರಕಟಿಸುವಂತಿಲ್ಲ. ಆದರೆ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಯೋ ಯೋ ಟೆಸ್ಟ್ ಅಂಕಗಳನ್ನು ಬಹಿರಂಗಪಡಿಸಿದ್ದರು.

ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಇದು ಬಿಸಿಸಿಐ ನಿಯಮಗಳ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಯಾವುದೇ ಆಟಗಾರರೂ ಯೋ ಯೋ ಟೆಸ್ಟ್ ಫಲಿತಾಂಶವನ್ನು ಬಹಿರಂಗಪಡಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ