ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಬಹಿಷ್ಕರಿಸುವ ಬೆದರಿಕೆ ಹಾಕಿದ ಬಿಸಿಸಿಐ?!

ಭಾನುವಾರ, 3 ಜನವರಿ 2021 (10:42 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತಿಮ ಟೆಸ್ಟ್ ಬ್ರಿಸ್ಬೇನ್ ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಆಟಗಾರರ ಮತ್ತೆ ಕ್ವಾರಂಟೈನ್ ಗೊಳಗಾಗಬೇಕು ಎಂದು ಆಸ್ಟ್ರೇಲಿಯಾ ನಿಯಮ ವಿಧಿಸಿರುವುದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದೆ.


ಈಗಾಗಲೇ ಆಸ್ಟ್ರೇಲಿಯಾಕ್ಕೆ ಬಂದಿಳಿದ ತಕ್ಷಣವೇ ಆಟಗಾರರು 14 ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಗಾಗಿದ್ದರು. ಅದಾದ ಬಳಿಕ ಜೈವಿಕ ಸುರಕ್ಷಾ ವಲಯದಲ್ಲಿದ್ದಾರೆ. ಇದರ ಮಧ‍್ಯೆ ಮೂರನೇ ಟೆಸ್ಟ್ ಪಂದ್ಯ ಕೊರೋನಾ ಪ್ರಕರಣಗಳಿರುವ ಸಿಡ್ನಿಯಲ್ಲಿ ನಡೆಯುತ್ತಿದೆ. ಹೀಗಾಗಿ ಆಟಗಾರರು ಮತ್ತೆ ಕ್ವಾರಂಟೈನ್ ಗೊಳಗಾಗಬೇಕು, ಕಠಿಣ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಆಸ್ಟ್ರೇಲಿಯಾ ಸ್ಥಳೀಯಾಡಳಿತ ಹೇಳಿರುವುದು ಬಿಸಿಸಿಐ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೆ ಕ್ವಾರಂಟೈನ್ ಎಂದರೆ ಆಟಗಾರರಿಗೆ ತಯಾರಾಗಲು ಸಮಯ ಸಿಗದು. ಹೀಗಾಗಿ ಕಠಿಣ ನಿಯಮ ಪಾಲಿಸಲೇಬೇಕು ಎಂದಾದರೆ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಲೂ ಹಿಂಜರಿಯುವುದಿಲ್ಲ ಎಂದು ಬಿಸಿಸಿಐ ಹೇಳಿದೆ ಎನ್ನಲಾಗಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದನ್ನು ನಿರಾಕರಿಸಿದ್ದು, ಬ್ರಿಸ್ಬೇನ್ ನಲ್ಲಿ ಕಠಿಣ ನಿಯಮಾವಳಿ ಇರುವುದು ನಿಜ. ಆದರೆ ಕ್ವಾರಂಟೈನ್ ಅಲ್ಲ. ಸರಣಿ ರದ್ದಾಗದು ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ