ಬೆಂಗಳೂರು: ಸೋಮವಾರ ನಿಧನರಾದ ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ದೋಷಿ ಅವರಿಗೆ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ 5 ನೇ ದಿನದಂದು ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಮೌನ ಆಚರಿಸಿ ಕಪ್ಪುಪಟ್ಟಿ ಧರಿಸುವ ಮೂಲಕ ಗೌರವ ಸೂಚಿಸಿದರು.
ಎಕ್ಸ್‌ನಲ್ಲಿ BCCI, "ಸೋಮವಾರ ನಿಧನರಾದ ಮಾಜಿ ಭಾರತೀಯ ಕ್ರಿಕೆಟಿಗ ದಿಲೀಪ್ ದೋಷಿ ಅವರ ಸ್ಮರಣಾರ್ಥ ಎರಡೂ ತಂಡಗಳು ಇಂದು ಕಪ್ಪು ತೋಳುಗಳನ್ನು ಧರಿಸಿವೆ. 5 ನೇ ದಿನದ ಆರಂಭಕ್ಕೂ ಮೊದಲು ತಂಡಗಳು ಒಂದು ನಿಮಿಷ ಮೌನವನ್ನು ಆಚರಿಸಿದವು ಎಂದು ಬರೆದುಕೊಂಡಿತು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು
ದಿಲೀಪ್ ದೋಷಿ 32 ನೇ ವಯಸ್ಸಿನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ, 4 ವರ್ಷಗಳಲ್ಲಿ ಶತಕ ವಿಕೆಟ್‌ಗಳನ್ನು ಪೂರೈಸಿದರು. ಅದಾದ ನಂತರ, ದೋಷಿ ಕ್ರಿಕೆಟ್‌ನಿಂದ ದೂರ ಸರಿದರು. ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಆತ್ಮಚರಿತ್ರೆಯನ್ನು ಸಹ ಬರೆದಿದ್ದಾರೆ. ದೋಷಿ ಅವರ ಆತ್ಮಚರಿತ್ರೆಯನ್ನು 'ಸ್ಪಿನ್ ಪಂಚ್' ಎಂದು ಕರೆಯಲಾಗುತ್ತದೆ.