ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್, ಮಾರ್ಕ್ ವುಡ್ ವಾಪಸ್

ಮಂಗಳವಾರ, 16 ಆಗಸ್ಟ್ 2016 (19:56 IST)
ಇಂಗ್ಲೆಂಡ್ ತಂಡವು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಮಾರ್ಕ್ ವುಡ್ ಅವರನ್ನು ಪಾಕಿಸ್ತಾನದ ವಿರುದ್ಧ ಏಕ ದಿನ ಸರಣಿಗೆ 15 ಮಂದಿಯ ತಂಡದಲ್ಲಿ ಆಯ್ಕೆಮಾಡಿದೆ.  ಸ್ಟೋಕ್ಸ್ ಶ್ರೀಲಂಕಾ ವಿರುದ್ಧ ಸ್ವದೇಶಿ ಸರಣಿಯಲ್ಲಿ ಮಂಡಿ ಗಾಯಕ್ಕೆ ಒಳಗಾಗಿದ್ದರು.

ಪಾಕ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಬಲ ಹಿಮ್ಮಡಿಯ ಸ್ನಾಯು ಗಾಯದಿಂದ ಸರಣಿಯ ಉಳಿದ ಪಂದ್ಯಗಳಿಗೆ ಆಡಿರಲಿಲ್ಲ. ಏಕ ದಿನ ಸರಣಿಗೆ ಮತ್ತು ಭಾರತದ ಪ್ರವಾಸಕ್ಕೆ ಅವರು ಫಿಟ್ ಆಗುವುದಕ್ಕಾಗಿ ಸರಣಿಯ ಉಳಿದ ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. 
 
ಮಾರ್ಕ್ ವುಡ್ ಹಿಮ್ಮಡಿ ಗಂಟಿನ ಶಸ್ತ್ರಚಿಕಿತ್ಸೆಯಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಏತನ್ಮದ್ಯೆ ಇಂಗ್ಲೆಂಡ್ ಐದು ಏಕದಿನಗಳಿಗೆ ಜೇಮ್ಸ್ ವಿನ್ಸ್ ಅವರನ್ನು ತಂಡದಿಂದ ಡ್ರಾಪ್ ಮಾಡಿದೆ. ವಿನ್ಸ್ ಶ್ರೀಲಂಕಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದ ಅರ್ಧಶತಕ ಗಳಿಸಲು ವಿಫಲರಾಗಿದ್ದರು. ಪಾಕ್ ಸರಣಿಯಲ್ಲಿ 22 ರನ್ ಸರಾಸರಿಯಲ್ಲಿ ಒಟ್ಟು 158 ರನ್ ಸ್ಕೋರ್ ಮಾಡಿದ್ದರು.
 
 ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಏಕ ದಿನ ಸರಣಿ ವೇಳಾಪಟ್ಟಿ ಕೆಳಗಿದೆ
ಆಗಸ್ಟ್ 24: ಮೊದಲ ಏಕದಿನ, ಸೌತಾಂಪ್ಟನ್
ಆಗಸ್ಟ್ 27: 2ನೇ ಏಕದಿನ, ಲಾರ್ಡ್ಸ್
ಆ.30: 3 ನೇ ಏಕದಿನ, ಟ್ರೆಂಟ್ ಬ್ರಿಜ್
ಸೆ. 1: 4ನೇ ಏಕದಿನ, ಹೆಡಿಂಗ್ಲೇ

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ