ಮಗನ ವಿಷಯಕ್ಕೆ ಬಂದ ನೆಟ್ಟಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಬುಮ್ರಾ ಪತ್ನಿ ಸಂಜನಾ

Sampriya

ಸೋಮವಾರ, 28 ಏಪ್ರಿಲ್ 2025 (16:24 IST)
ಬೆಂಗಳೂರು: ಮಗನ ಸಂಬಂಧವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್‌ಗೆ ಸಂಬಂಧ ಕ್ರಿಕೆಟಿಗ ಜಸ್ರೀತ್ ಬುಮ್ರಾ ಪತ್ನಿ ಸಂಜನಾ ಖಡಕ್ ಆಗಿ ನೆಟ್ಟಿಗರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮುಂಬೈನ್ ವಾಂಖೆಡೆ ಕ್ರೀಡಾಂಹಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಲಖನೌ ಸೂಪರ್ ಜೈಂಟ್ಸ್‌ ತಂಡ ಮುಖಾಮುಖಿಯಾಗಿದ್ದವು.

ಈ ವೇಳೆ ಸಂಜನಾ ಗಣೇಶನ್ ಮಗ ಅಂಗದ್ ಜತೆಯಲ್ಲಿ ಕ್ರೀಡಾಂಗಣದಲ್ಲಿ ಹಾಜರಿದ್ದರು.

ಈ ಪಂದ್ಯಾಟದಲ್ಲಿ ಬೂಮ್ರಾ ವಿಶೇಷವಾಗಿ ಗಮನ ಸೆಳೆದಿದ್ದರು. ಈ ವೇಳೆ ಮಗ ಅಂಗದ್ ಸಪ್ಪೆ ಮೊರೆ ಹಾಕಿ ಕುಳಿತಿದ್ದನ್ನು
ನೋಡಿ ನೆಟ್ಟಿಗರು ಬೂಮ್ರಾ ಮಗನಿಗೆ ಏನೋ ಸಮಸ್ಯೆಯಿದೆ ಎಂಬಂತೆ ಟ್ರೋಲ್ ಮಾಡಿದ್ದರು.

ಟ್ರೋಲ್ ನೋಡಿ ಖರವಾಗಿ ಪ್ರತಿಕ್ರಿಯಿಸಿದ ಸಂಜನಾ , ನಮ್ಮ ಮಗ ನಿಮ್ಮ ಮನರಂಜನಯೆ ವಸ್ತುವಲ್ಲ. ಸಾಮಾನ್ಯವಾಗಿ ಬೂಮ್ರಾ ಮತ್ತು ನಾನು ಅಂಗದ್‌ನನ್ನು ಸಾಮಾಜಿಕ ಜಾಲತಾಣದಿಂದ ದೂರವಿಡುತ್ತೇವೆ.


ಒಂದೂವರೆ ವರ್ಷದ ಮಗುವಿಗೆ ಮಾನಸಿಕ ಸಮಸ್ಯೆಯಿದೆ, ಇದು ಆಘಾತಕಾರಿ ಎನ್ನುವ ಮಾತುಗಳನ್ನು ಆಡುವುದು ನಿಜಕ್ಕೂ ಬೇಸರದ ಸಂಗತಿ. ನಮ್ಮ ಮಗುವಿನ ಬಗ್ಗೆಯಾಗಲಿ, ನಮ್ಮ ಜೀವನದ ಬಗ್ಗೆಯಾಗಲಿ ನಿಮಗೆ ಏನೂ ತಿಳಿದಿಲ್ಲ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇರಿಸಿಕೊಳ್ಳಿ, ಅದು ನಿಜವಲ್ಲ ಎಂದು ಬರೆದುಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ