IPL 2025: ಬೇರೆಯವರು ಸೋತಾಗ ನಗಬೇಡಿ ಅಂಬಟಿ ರಾಯುಡು: ಆರ್ ಸಿಬಿ ಈಗ ಟಾಪರ್ ಸಿಎಸ್ ಕೆ ಲಾಸ್ಟ್

Krishnaveni K

ಸೋಮವಾರ, 28 ಏಪ್ರಿಲ್ 2025 (11:16 IST)
ಬೆಂಗಳೂರು: ಐಪಿಎಲ್ 2025 ಆರಂಭಕ್ಕೆ ಮುನ್ನ ವೀಕ್ಷಕ ವಿವರಣೆಕಾರ, ಚೆನ್ನೈ ಮಾಜಿ ಆಟಗಾರ ಅಂಬಟಿ ರಾಯುಡು, ಆರ್ ಸಿಬಿಯನ್ನು ಲೇವಡಿ ಮಾಡುತ್ತಲೇ ಇದ್ದರು. ಸಿಎಸ್ ಕೆ ಈ ಬಾರಿಯೂ ಕಪ್ ಗೆಲ್ಲುತ್ತದೆ ಎಂದಿದ್ದರು. ಆದರೆ ಈಗ ಆರ್ ಸಿಬಿ ಟೇಬಲ್ ಟಾಪರ್ ಆಗಿದ್ದರೆ ಸಿಎಸ್ ಕೆ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಅಭಿಮಾನಿಗಳು ಬೇರೆಯವರು ಸೋತಾಗ ನಗಬೇಡಿ ಸಾರ್ ಎಂದು ಕಾಲೆಳೆದಿದ್ದಾರೆ.

ಆರ್ ಸಿಬಿಯಂತಹ ತಂಡ ಐಪಿಎಲ್ ನಲ್ಲಿ ಮನರಂಜನೆ ಕೊಡಲಾದರೂ ಇರಬೇಕು. ಈ ಬಾರಿಯೂ ಆರ್ ಸಿಬಿಯೇನೂ ಕಪ್ ಗೆಲ್ಲಲ್ಲ ಬಿಡಿ. ಕೇವಲ ಪ್ಲೇ ಆಫ್ ಗೇರಿದ್ದಕ್ಕೆ ಕಪ್ ಗೆದ್ದಂತೆ ಸಂಭ್ರಮಿಸುತ್ತದೆ ಎಂದು ಲೇವಡಿ ಮಾಡುತ್ತಲೇ ಇದ್ದರು.

ಜೊತೆಗೆ ತಮ್ಮ ಹಳೆಯ ತಂಡ ಸಿಎಸ್ ಕೆಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಸಿಎಸ್ ಕೆ ಮುಂದೆ ಆರ್ ಸಿಬಿ ಏನೂ ಅಲ್ಲ ಎನ್ನುವಂತೆ ಆಡುತ್ತಿದ್ದರು. ಆದರೆ ಈಗ ಆರ್ ಸಿಬಿ 10 ಪಂದ್ಯಗಳಿಂದ 7 ಗೆಲುವುಗಳೊಂದಿಗೆ 14 ಅಂಕ ಸಂಪಾದಿಸಿ ಟೇಬಲ್ ಟಾಪರ್ ಆಗಿದೆ.

ಇತ್ತ ಸಿಎಸ್ ಕೆ 9 ಪಂದ್ಯಗಳಿಂದ ಕೇವಲ 2 ಗೆಲುವುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಒಂದು ಕಾಲದ ಚಾಂಪಿಯನ್ ತಂಡದ ಸ್ಥಿತಿ ಈಗ ಹೀಗಾಗಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ಆರ್ ಸಿಬಿ ಅಭಿಮಾನಿಗಳು ಮಾತ್ರ ಖುಷಿಯಾಗಿದ್ದಾರೆ. ಕಾಲ ಒಂದೇ ಥರ ಇರಲ್ಲ, ನಮಗೂ ಕಾಲ ಬರುತ್ತದೆ ಎಂದು ಅಂಬಟಿ ರಾಯುಡು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ