ನೋಬಾಲ್ ಜಾಹೀರಾತಿನ ಬಗ್ಗೆ ಬುಮ್ರಾ ತೀವ್ರ ಅಸಮಾಧಾನ

ಶನಿವಾರ, 24 ಜೂನ್ 2017 (17:18 IST)
ಜೈಪುರ ಟ್ರಾಫಿಕ್ ಪೊಲೀಸರು ನೋಬಾಲ್ ಜಾಹೀರಾತು ಕುರಿತಂತೆ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕ್ಷಮೆ ಕೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟ್ಸ್`ಮನ್ ಫಖಾರ್ ಔಟಾಗಿದ್ದರು. ಆ ಬಾಲು ನೋಬಾಲ್ ಆಗಿದ್ದರಿಂದ ಆತ ಜೀವದಾನ ಪಡೆದ. ಬಳಿಕ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದೇ ನೋ ಬಾಲ್ ಇಮೇಜ್ ಬಳಸಿಕೊಂಡು ಜೈಪುರ ಪೊಲೀಸರು ಟ್ರಾಫಿಕ್ ಸುರಕ್ಷತೆ ಜಾಹೀರಾತು ತಯಾರಿಸಿದ್ದರು.

ಈ ಕುರಿತಂತೆ ಟ್ವೀಟ್ ಮಾಡಿದ್ದ ಬುಮ್ರಾ ಜೈಪುರ ಪೊಲೀಸರೇ ಒಳ್ಳೆಯ ಜಾಹೀರಾತು ಮಾಡಿದ್ದೀರಾ.. ಇದು ನೀವು ನಿಮ್ಮ ದೇಶವನ್ನ ಎಷ್ಟು ಪ್ರೀತಿಸುತ್ತೀರಾ ಎಂದು ತೋರಿಸುತ್ತದೆ ಎಂದು ಹೇಳಿದ್ದರು. ಮತ್ತೊಂದು ಟ್ವೀಟ್`ನಲ್ಲಿ ಜೈಪುರ ಟ್ರಾಫಿಕ್ ಪೊಲೀಸರೇ ಡೋಂಟ್ ವರಿ ನೀವು ನಿಮ್ಮ ಕೆಲಸದಲ್ಲಿ ಮಾಡಿದ ತಪ್ಪಿನ ಬಗ್ಗೆ ನಾನು ತಮಾಷೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್`ನಲ್ಲೇ ಪ್ರತಿಕ್ರಿಯಿಸಿರುವ ಜೈಪುರ ಟ್ರಾಫಿಕ್ ಪೊಲೀಸರು ನಿಮಗೆ  ಮತ್ತು ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಘಾಸಿಮಾಡುವ ಉದ್ದೇಶ ನಮ್ಮದಲ್ಲ. ಜನರಲ್ಲಿ ಅರಿವು ಮೂಡಿಸುವುದಷ್ಟೇ ನಮ್ಮ ಉದ್ದೇಶ. ನೀನು ದೇಶದ ಯೂತ್ ಐಕಾನ್, ನಮಗೆಲ್ಲ ಸ್ಫೂರ್ತಿ ಎಂದು ಕ್ಷಮೆ ಕೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ