ಸರ್ಫರಾಜ್ ಖಾನ್ ಎರಡೇ ತಿಂಗಳಲ್ಲಿ 17 ಕೆಜಿ ತೂಕ ಇಳಿಸಿದ್ದು ಹೇಗೆ

Krishnaveni K

ಮಂಗಳವಾರ, 22 ಜುಲೈ 2025 (15:43 IST)
ಮುಂಬೈ: ದಡೂತಿ ದೇಹ ಹೊಂದಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಎರಡೇ ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಅವರು ಫಿಟ್ನೆಸ್ ಗಾಗಿ ಪಟ್ಟ ಕಷ್ಟಗಳೆಲ್ಲವೂ ಈಗ ಬಯಲಾಗಿದೆ.

ತೂಕ ಹೆಚ್ಚಳದ ಕಾರಣಕ್ಕೆ ಸರ್ಫರಾಜ್ ಖಾನ್ ಸಾಕಷ್ಟು ಟೀಕೆಗೊಳಗಾಗಿದ್ದರು. ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಈಗ ಸರ್ಫರಾಜ್ ಖಾನ್ ತಮ್ಮ ದೇಹ ತೂಕ ಇಳಿಸಲು ಹರಸಾಹಸ ಪಟ್ಟಿದ್ದಾರೆ. ಎರಡೇ ತಿಂಗಳಲ್ಲಿ 17 ಕೆ.ಜಿ ತೂಕ ಇಳಿಸಿಕೊಂಡಿದ್ದು ಈಗ ಸ್ಲಿಮ್ ಆಂಡ್ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.

ಒಮ್ಮಿಂದೊಮ್ಮೆಲೇ ಅವರು ತೂಕ ಇಳಿಸಿಕೊಂಡಿದ್ದಲ್ಲ. ಹಂತ ಹಂತವಾಗಿ ಒಂದು ಸಮಯಕ್ಕೆ 1 ಕೆ.ಜಿ ಎನ್ನುವಂತೆ ತೂಕ ಇಳಿಕೆ ಮಾಡುತ್ತಾ ಹೋಗಿದ್ದಾರೆ. ಅವರ ತೂಕ ಇಳಿಕೆ ಬಗ್ಗೆ ತಂದೆ ನೌಶಾದ್ ಖಾನ್ ಬಿಚ್ಚಿಟ್ಟಿದ್ದಾರೆ. ಇದಕ್ಕಾಗಿ ಅನ್ನ, ಕೊಬ್ಬಿನಂಶದ ಆಹಾರವನ್ನೆಲ್ಲಾ ತ್ಯಜಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಅವರ ಇಷ್ಟದ ರೋಟಿಯನ್ನೇ ತಿಂದಿಲ್ವಂತೆ. ಕೇವಲ ಬ್ರಾಕೊಲಿ, ಕ್ಯಾರೆಟ್, ಸೌತೆಕಾಯಿ, ಸಲಾಡ್ ಗಳನ್ನೇ ತಿನ್ನುತ್ತಿದ್ದಾರಂತೆ. ಗ್ರಿಲ್ಡ್ ಚಿಕನ್, ಗ್ರಿಲ್ಡ್ ಫಿಶ್, ಬೇಯಿಸಿದ ಮೊಟ್ಟೆ ಮಾತ್ರವೇ ತಿನ್ನುತ್ತಿದ್ದರಂತೆ. ಗ್ರೀನ್ ಟೀ, ಗ್ರೀನ್ ಕಾಫಿ ಮಾತ್ರ ಸೇವನೆ ಮಾಡುತ್ತಿದ್ದಾರೆ. ಉಳಿದಂತೆ ಬೇಕರಿ ತಿಂಡಿಗಳು, ಸಕ್ಕರೆ, ಮೈದಾದಿಂದ ತಯಾರಿಸಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ತೂಕ ಇಳಿಸಿಕೊಂಡಿದ್ದಾಗಿ ಅವರ ತಂದೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ