ಬರೀಂದರ್ ಸ್ರಾನ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿ ಪೆವಿಲಿಯನ್ ಮಾರ್ಚ್‌ಫಾಸ್ಟ್ ಮಾಡಿದರು. ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ಬರೀಂದರ್ ಸ್ರಾನ್ 4 ವಿಕೆಟ್ ಕಬಳಿಸಿದರು.
ಸ್ರಾನ್ ಮತ್ತು ಬುಮ್ರಾ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು, ಸ್ರಾನ್ ನಾಲ್ಕು ಓವರುಗಳಲ್ಲಿ ಕೇವಲ 10 ರನ್ ನೀಡಿದ್ದರೆ, ಬುಮ್ರಾ 4 ಓವರುಗಳಲ್ಲಿ 11 ರನ್ ಮಾತ್ರ ನೀಡಿದ್ದಾರೆ. ಬರೀಂದರ್ ಅವರ ಮಾರಕ ದಾಳಿಗೆ ಆರಂಭದಲ್ಲೇ ಚಿಬಾಬಾ, ಮಸಕಾಡ್ಜಾ, ಸಿಕಂದರ್ ರಾಜಾ, ಮುಂಟೋಂಬೋಡ್ಜಿ ಔಟಾದರು.