ಲಂಡನ್ ಪ್ರವಾಸ ಮುಗಿಸಿ ಬಂದ ರೋಹಿತ್ ಶರ್ಮಾ

ಮಂಗಳವಾರ, 5 ಡಿಸೆಂಬರ್ 2023 (10:50 IST)
ಮುಂಬೈ: ವಿಶ್ವಕಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ವಿಶ್ವಕಪ್ ಸೋಲಿನ ನಂತರ ತೀವ್ರ ಬೇಸರಗೊಂಡಿದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ, ಮಗಳ ಜೊತೆ ಲಂಡನ್ ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಕೆಲವು ದಿನಗಳ ಕಾಲ ವಿರಾಮ ಪಡೆದು ಇದೀಗ ಮುಂಬೈಗೆ ಬಂದಿಳಿದಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಮಗಳನ್ನು ಎತ್ತಿಕೊಂಡು ಬರುತ್ತಿರುವ ರೋಹಿತ್ ಶರ್ಮಾ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವೇಳೆ ಅವರು ಯಾರೊಂದಿಗೂ ಮಾತನಾಡಲಿಲ್ಲ.

ನೇರವಾಗಿ ಪತ್ನಿ, ಮಗಳೊಂದಿಗೆ ಕಾರಿನಲ್ಲಿ ಕೂತು ಮನೆಯತ್ತ ತೆರಳಿದ್ದಾರೆ. ಸದ್ಯಕ್ಕೆ ದ.ಆಫ್ರಿಕಾ ವಿರುದ್ಧ ಟಿ20, ಏಕದಿನ ಪಂದ್ಯಗಳಿಂದಲೂ ರೋಹಿತ್ ವಿಶ್ರಾಂತಿ ಪಡೆದಿದ್ದಾರೆ. ಬಳಿಕ ನಡೆಯಲಿರುವ ಟೆಸ್ಟ್ ಸರಣಿ ವೇಳೆಗೆ ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ