ದ್ವಿತಶತಕ ತಪ್ಪಿಸಿಕೊಂಡ ಚೇತೇಶ್ವರ ಪೂಜಾರಗೆ ಎದುರಾಳಿಗಳೂ ನೀಡಿದ ಅಚ್ಚರಿಯ ಬೀಳ್ಕೊಡುಗೆ

ಶುಕ್ರವಾರ, 4 ಜನವರಿ 2019 (09:50 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ದಿನವಾದ ಇಂದು ನಿನ್ನೆ ಶತಕ ಸಿಡಿಸಿ ಅಜೇಯರಾಗುಳಿದಿದ್ದ ಚೇತೇಶ್ವರ ಪೂಜಾರ 193 ರನ್ ಗಳಿಗೆ ಔಟಾಗುವ ಮೂಲಕ ಸ್ವಲ್ಪದರಲ್ಲೇ ದ್ವಿತಶಕ ತಪ್ಪಿಸಿಕೊಂಡರು.


ಆದರೆ ಪೂಜಾರ ಮ್ಯಾರಥಾನ್ ಇನಿಂಗ್ಸ್ ಗೆ ಎದುರಾಳಿ ಆಟಗಾರರೂ ಚಪ್ಪಾಳೆ ತಟ್ಟಿ ಗೌರವಿಸಿದರು. ಇಷ್ಟು ದಿನ ಮೈದಾನದಲ್ಲಿದ್ದ ಆಸೀಸ್ ಅಭಿಮಾನಿಗಳು ಭಾರತೀಯ ಕ್ರಿಕೆಟಿಗರನ್ನು, ಪ್ರೇಕ್ಷಕರನ್ನು ಮೂದಲಿಸುತ್ತಿದ್ದರು. ಆದರೆ ಸಿಡ್ನಿಯಲ್ಲಿ ಪೂಜಾರ ಔಟಾಗಿ ಪೆವಿಲಿಯನ್ ಗೆ ಮರಳುವಾಗಿ ಇಡೀ ಮೈದಾನವೇ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದ್ದು ಸ್ಮರಣೀಯವಾಗಿತ್ತು.

ಇನ್ನು ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 491 ರನ್ ಗಳಿಸಿದೆ. ರಿಷಬ್ ಪಂತ್ 88 ರನ್ ಗಳಿಸಿದ್ದು ಶತಕದತ್ತ ದಾಪುಗಾಲಿಡುತ್ತಿದ್ದಾರೆ. 25 ರನ್ ಗಳಿಸಿರುವ ರವೀಂದ್ರ ಜಡೇಜಾ ಸಾಥ್ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಹನುಮ ವಿಹಾರಿ 44 ರನ್ ಗಳಿಸಿ ಔಟಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ