ಭಾರತ-ಆಸ್ಟ್ರೇಲಿಯಾ ಟೆಸ್ಟ್: ಸುನಿಲ್ ಗವಾಸ್ಕರ್, ಪೃಥ್ವಿ ಶಾ ಸಾಲಿಗೆ ಸೇರಿದ ಮಯಾಂಕ್ ಅಗರ್ವಾಲ್

ಗುರುವಾರ, 3 ಜನವರಿ 2019 (09:36 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಮತ್ತೊಂದು ಅರ್ಧಶತಕ ಗಳಿಸಿದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್, ಯುವ ಆರಂಭಿಕ ಪೃಥ್ವಿ ಶಾ ಸಾಲಿಗೆ ಸೇರಿದ್ದಾರೆ.


ತೃತೀಯ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿ ಅರ್ಧಶತಕ ಗಳಿಸಿದ್ದ ಮಯಾಂಕ್ ಇದೀಗ ನಾಲ್ಕನೇ ಟೆಸ್ಟ್ ನಲ್ಲೂ 77 ರನ್ ಗಳಿಸಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕ ಗಳಿಸಿದ ಗವಾಸ್ಕರ್, ಪೃಥ್ವಿ ದಾಖಲೆ ಸರಿಗಟ್ಟಿದ್ದಾರೆ.

ಇನ್ನು, ಮಯಾಂಕ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿದ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಎಂದಿನಂತೇ 9 ರನ್ ಗಳಿಗೆ ಔಟಾಗಿ ಮತ್ತೊಂದು ಕಳಪೆ ಪ್ರದರ್ಶನವಿತ್ತರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇತ್ತೀಚೆಗಿನ ವರದಿ ಬಂದಾಗ ಎರಡು ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ 19 ಮತ್ತು ಚೇತೇಶ್ವರ ಪೂಜಾರ 53 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸೀಸ್ ಪರ ನಥನ್ ಲಿಯೋನ್ ಮತ್ತು ಹೇಝಲ್ ವುಡ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ