ಟೀಂ ಇಂಡಿಯಾ, ಐಪಿಎಲ್ ನಲ್ಲಿ ಸ್ಥಾನ ಪಡೆಯದ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ ನತ್ತ

ಶುಕ್ರವಾರ, 11 ಮಾರ್ಚ್ 2022 (09:20 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಗೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಜೊತೆಗೆ ಐಪಿಎಲ್ ನಲ್ಲೂ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಹೀಗಾಗಿ ಪೂಜಾರ ಈಗ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದಾರೆ.

ಸಸೆಕ್ಸ್ ತಂಡದ ಪರ ಕೌಂಟಿ ಕ್ರಿಕೆಟ್ ಆಡಲು ಪೂಜಾರ ಗುತ್ತಿಗೆಗೆ ಸಹಿ ಹಾಕಿದ್ದಾರೆ. ಜೊತೆಗೆ ರಾಯಲ್ ಲಂಡನ್ ಏಕದಿನ ಟೂರ್ನಿಯಲ್ಲೂ ಭಾಗಿಯಾಗಲಿದ್ದಾರೆ.

ಇತ್ತ ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾಗೆ ವಾಪಸ್ ಆಗಲು ಶ್ರಮಿಸುತ್ತಿರುವ ಪೂಜಾರ ಈಗ ಕೌಂಟಿ ಕ್ರಿಕೆಟ್ ನಲ್ಲಿ ಆಡಿ ರನ್ ಗಳಿಸುವ ಪ್ರಯತ್ನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ