ರವಿಶಾಸ್ತ್ರಿ, ದ್ರಾವಿಡ್ ಮತ್ತು ಜಹೀರ್ ಜೊತೆಗಿನ ಒಪ್ಪಂದಕ್ಕೆ ತಡೆ

ಶುಕ್ರವಾರ, 14 ಜುಲೈ 2017 (08:24 IST)
ಭಾರತೀಯ ಕ್ರಿಕೆಟ್`ನ ಕೋಚ್ ಆಯ್ಕೆಯ ಡ್ರಾಮಾ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಗಂಗೂಲಿ, ಸಚಿನ್, ಲಕ್ಷ್ಮಣ್ ನೇತೃತ್ವದ ಸಲಹಾ ಸಮಿತಿ ರವಿಶಾಸ್ತ್ರಿ, ದ್ರಾವಿಡ್ ಮತ್ತು ಜಹೀರ್ ಖಾನ್ ಅವರನ್ನ ಕ್ರಮವಾಗಿ ಹೆಡ್ ಕೋಚ್, ಬ್ಯಾಟಿಂಗ್ ಮತ್ತು ಬೌಲಿಂಗ್ ಸಲಹೆಗಾರರಾಗಿ ನೇಮಿಸಲಾಗಿತ್ತು. ಆದರೆ, ಅವರಿಗೆ ನೀಡಬೇಕಾದ ಅಧಿಕೃತ ಒಪ್ಪಂದ ಈಗ ತಡೆಹಿಡಿಯಲಾಗಿದ್ದು, ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಪ್ರಕ್ರಿಯೆ ಮುಂದುವರೆಯಲಿದೆ ಎಂದು ವರದಿಯಾಗಿದೆ.
 

ಸಲಹಾ ಸಮಿತಿ ನೇಮಿಸಿರುವ ಬೌಲಿಂಗ್ ಮತ್ತು ಬ್ಯಾಟಿಂಗ್ ಕೋಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರವಿಶಾಸ್ತ್ರೀ, ಈಗಾಗಲೇ ಇರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಜೊತೆ ಫುಲ್ ಟೈಮ್ ಬೌಲಿಂಗ್ ಕೋಚ್ ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಆಡಳಿತ ಮಂಡಳಿ ಮೂರೂ ಆಯ್ಕೆಯನ್ನ ತಡೆಹಿಡಿದಿದೆ.

ಬಿಸಿಸಿಐನ ಕಾನೂನು ವಿಭಾಗ ರವಿಶಾಸ್ತ್ರಿ ಜೊತೆಗಿನ ಒಪ್ಪಂದದ ಪತ್ರಗಳ ಸಿದ್ಧತೆಗೆ ಆಡಳಿತ ಮಂಡಳಿ ತಡೆ ವಿಧಿಸಿದ್ದು, ನಾವು ಹೇಳುವವರೆಗೂ ಕಾಗದ ಪತ್ರ ರರೆಡಿ ಮಾಡದಂತೆ ಆದೇಶಿಸಿದೆಯಂತೆ.ಜೊತೆಗೆ ಜಹೀರ್ ಖಾನ್ ಕೇಳುತ್ತಿರುವ 4 ಕೋಟಿ ಸಂಭಾವನೆ ನೀಡಲು ಬಿಸಿಸಿಐ ಸಿದ್ಧವಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ