ಐಪಿಎಲ್ ನಲ್ಲಿ ಪರ್ಫಾರ್ಮ್ ಮಾಡಿದರೆ ಮಾತ್ರ ಧೋನಿಗೆ ಕಮ್ ಬ್ಯಾಕ್ ಭಾಗ್ಯ!

ಮಂಗಳವಾರ, 10 ಮಾರ್ಚ್ 2020 (09:31 IST)
ಮುಂಬೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಲಿರುವ ಧೋನಿಗೆ ಇದು ನಿರ್ಣಾಯಕವಾಗಲಿದೆ. ಹಾಗಂತ ಬಿಸಿಸಿಐ ಫರ್ಮಾನು ಹೊರಡಿಸಿದೆ.


ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ಪಂದ್ಯವನ್ನೇ ಆಡಿರದ ಧೋನಿ ಐಪಿಎಲ್ ನಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅವರಿಗೆ ಟೀಂ ಇಂಡಿಯಾಗೆ ಮರುಪ್ರವೇಶ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಆದರೆ ಇದಕ್ಕೂ ಮೊದಲೇ ಧೋನಿಯೇ ತಮ್ಮ ಭವಿಷ್ಯದ ಬಗ್ಗೆ ಘೋಷಣೆ ಮಾಡುವ ಸಾಧ‍್ಯತೆಯಿದೆ. ಈ ಬಗ್ಗೆ ದ.ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡುವಾಗಲೂ ಚರ್ಚೆ ನಡೆದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ