ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ದಿಲ್ಶಾನ್ ಬೌಲಿಂಗ್ ನಿಂದ ಸೋತ ಆಸ್ಟ್ರೇಲಿಯಾ ದಿಗ್ಗಜರು

ಸೋಮವಾರ, 9 ಮಾರ್ಚ್ 2020 (09:25 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ತಿಲಕರತ್ನೆ ದಿಲ್ಶಾನ್ ರ ಜಾಣ್ಮೆಯ ಬೌಲಿಂಗ್ ನಿಂದಾಗಿ ಶ್ರೀಲಂಕಾ ಲೆಜೆಂಡ್ಸ್ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡವನ್ನು 7 ರನ್ ಗಳಿಂದ ರೋಚಕವಾಗಿ ಸೋಲಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಲಂಕಾ ಪರ ಕಲುವಿತರಣ 30 ಹಾಗೂ ಚಾಮರ ಕಪುಗಡೆರ 28 ರನ್ ಸಿಡಿಸಿ ಉತ್ತಮ ಆರಂಭ ನೀಡಿದರು.

ಇದಕ್ಕೆ ಉತ್ತರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಕೊನೆಯ ಹಂತದಲ್ಲಿ ದಿಲ್ಶಾನ್ ಮಾಡಿದ ಅದ್ಭುತ ಬೌಲಿಂಗ್ ನಿಂದಾಗಿ 7 ರನ್ ಗಳಿಂದ ಸೋಲೊಪ್ಪಿಕೊಂಡಿತು. ಆರು ಬಾಲ್ ಗಳಿಂದ 17 ರನ್ ಬೇಕಾಗಿದ್ದಾಗ ದಿಲ್ಶಾನ್ ರನ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ