ರೋಹಿತ್, ಕೊಹ್ಲಿ ಮೀರಿದ ಕೆಎಲ್ ರಾಹುಲ್

ಸೋಮವಾರ, 16 ಮಾರ್ಚ್ 2020 (09:39 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಐಸಿಸಿ ಬಿಡುಗಡೆಗೊಳಿಸಿರುವ ಟಿ20 ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟಾಪ್ 2 ನೇ ಸ್ಥಾನ ಪಡೆದಿದ್ದಾರೆ.


ಒಟ್ಟು 100 ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಐಸಿಸಿ ಈ ಪೈಕಿ ರಾಹುಲ್ ಗೆ ಎರಡನೇ ಸ್ಥಾನ, ಪಾಕಿಸ್ತಾನದ ಬಾಬರ್ ಅಜಮ್ ಗೆ ನಂ.1 ಸ್ಥಾನ ನೀಡಿದೆ.

ವಿಶೇಷವೆಂದರೆ ಈ ಪಟ್ಟಿಯಲ್ಲಿ ರಾಹುಲ್ ನಾಯಕ ವಿರಾಟ್ ಕೊಹ್ಲಿ,  ರೋಹಿತ್ ಶರ್ಮಾಗಿಂತಲೂ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ 10 ನೇ ಸ್ಥಾನದಲ್ಲಿದ್ದರೆ, ಹಿಟ್ ಮ್ಯಾನ್ ರೋಹಿತ್ 11 ನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ