ಐಪಿಎಲ್ ರದ್ದು ಮಾಡಿ: ಕೇಂದ್ರ ವೈದ್ಯಕೀಯ ಶಿಕ್ಷಣ ಸಚಿವರ ಪತ್ರ

ಬುಧವಾರ, 11 ಮಾರ್ಚ್ 2020 (09:56 IST)
ಬೆಂಗಳೂರು: ದೇಶದಾದ್ಯಂತ ಕೊರೋನಾವೈರಸ್ ಭೀತಿಯಿರುವುದರಿಂದ ಈ ಬಾರಿಯ ಐಪಿಎಲ್ ರದ್ದುಗೊಳಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.


ಈಗಾಗಲೇ ಮಹಾರಾಷ್ಟ್ರ ಈ ಸಂಬಂಧಕ್ಕೆ ಕೇಂದ್ರಕ್ಕೆ ಮನವಿ ಮಾಡಿತ್ತು. ಇದೀಗ ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಗಳು ನಡೆಯಲಿರುವುದರಿಂದ ಸಚಿವ ಸುಧಾಕರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಜನ ಗುಂಪು ಸೇರುವುದರಿಂದ ಕೊರನಾ ಹರಡುವ ಭೀತಿ ಹೆಚ್ಚಿದೆ. ಹೀಗಾಗಿ ಇಂತಹ ಕ್ರೀಡಾ ಕೂಟಗಳನ್ನು ರದ್ದುಗೊಳಿಸಲು ಸಚಿವರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ