ಕುಂಬ್ಳೆಯನ್ನು ಹೆಡ್ ಕೋಚ್ ಹುದ್ದೆಗೆ ನೇಮಿಸಿದ್ದಕ್ಕೆ ಕರ್ಟ್ನಿ ವಾಲ್ಷ್ ಶ್ಲಾಘನೆ

ಸೋಮವಾರ, 18 ಜುಲೈ 2016 (15:47 IST)
ಅನಿಲ್ ಕುಂಬ್ಳೆಯವರನ್ನು ಹೆಡ್ ಕೋಚ್ ಆಗಿ ನೇಮಿಸಿದ ಬಿಸಿಸಿಐ ನಿರ್ಧಾರವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಕರ್ಟ್ನಿ ವಾಲ್ಷ್ ಶ್ಲಾಘಿಸಿದ್ದು, ಅವರು ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದಾರೆಂದು ತಿಳಿಸಿದರು.  ಇದೊಂದು ಉತ್ತಮ  ನಡೆ. ಅವರು ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಐಸಿಸಿ ಜತೆ ಕೂಡ ಒಳಗೊಂಡ ವ್ಯಕ್ತಿ ಎಂದು ವಾಲ್ಷ್ ಹೇಳಿದರು.
 
ರಾಷ್ಟ್ರೀಯ ಆಯ್ಕೆದಾರರು ಕೂಡ ಆಗಿರುವ ವಾಲ್ಷ್ , ಅಭ್ಯಾಸ ಪಂದ್ಯಗಳನ್ನು ವೀಕ್ಷಿಸಲು ಸೇಂಟ್ ಕಿಟ್ಸ್‌ನಲ್ಲಿ ಉಪಸ್ಥಿತರಿದ್ದು, ಭಾರತದ ಕೋಚ್ ಜತೆ ಡಿನ್ನರ್‌‌ನಲ್ಲಿ ಪಾಲ್ಗೊಂಡಿದ್ದರು.
 
ಕುಂಬ್ಳೆ ವಿಶೇಷ ಎನ್ನುವುದಕ್ಕೆ ಕಾರಣ ವಿಶ್ಲೇಷಿಸಿದ ವಾಲ್ಷ್, ಗೌರವ ಪಡೆಯುವ ಅವರ ಸಾಮರ್ಥ್ಯ ಎಂದು ಹೇಳಿದರು. ಆಟಗಾರರಿಗೆ ಅವರ ಬಗ್ಗೆ ತುಂಬಾ ಗೌರವವಿದೆ. ಏಕೆಂದರೆ ಕುಂಬ್ಳೆ ಆಟವನ್ನು ಇಷ್ಟು ವರ್ಷಗಳ ಕಾಲ ಆಟಗಾರರು ನೋಡಿದ್ದರು. ಕುಂಬ್ಳೆ ಆಡುವುದನ್ನು ಬಿಟ್ಟಿದ್ದರೂ ಕ್ರಿಕೆಟ್ ಜತೆ ಕುಂಬ್ಳೆ ಹೆಚ್ಚು ತೊಡಗಿಸಿಕೊಂಡಿದ್ದು, ಪ್ರಸಕ್ತ ದಿನದ ಆಟದ ಒಳಹೊರಗನ್ನು ಬಲ್ಲವರಾಗಿದ್ದಾರೆಂದು ತಿಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ