ಐಪಿಎಲ್ ಫೈನಲ್ ಗೆ ಮೊದಲು ಸಿಎಸ್ ಕೆ ಟೀಂ ಮೀಟಿಂಗ್ ಐದೇ ಸೆಕೆಂಡ್ ನಲ್ಲಿ ಮುಗಿದಿತ್ತಂತೆ!

ಬುಧವಾರ, 13 ಜೂನ್ 2018 (09:25 IST)
ರಾಂಚಿ: ಐಪಿಎಲ್ ಫೈನಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಆದರೆ ಈ ಫೈನಲ್ ಪಂದ್ಯಕ್ಕೆ ಮೊದಲು ಧೋನಿ ತಮ್ಮ ಆಟಗಾರರ ಜತೆ ಗಂಟೆಗಟ್ಟಲೆ ಸಭೆ ನಡೆಸಿರಬಹುದು ಎಂದು ನೀವು ಊಹಿಸಿರಬಹುದು. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಧೋನಿಯೇ ಹೇಳಿಕೊಂಡಿದ್ದಾರೆ.

ಫೈನಲ್ ಪಂದ್ಯಕ್ಕೆ ಮೊದಲು ನಾವು ವಿಶೇಷ ತಯಾರಿಯೇನೂ ಇರಲಿಲ್ಲ. ಕೇವಲ ಐದು ಸೆಕೆಂಡ್ ಗಳಲ್ಲಿ ಟೀಂ ಮೀಟಿಂಗ್ ಮುಗಿದು ಹೋಗಿತ್ತು. ಸೋತರೂ ಕುಗ್ಗಬಾರದು ಎಂದು ಹೇಳಿ ಆಟ ಆರಂಭಿಸಿದ್ದೆವು ಎಂದು ಧೋನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ