ಏಕದಿನ ವಿಶ್ವಕಪ್: ಸೋತ ಪಾಕ್-ಬಾಂಗ್ಲಾ ನಡುವೆ ಇಂದಿನ ಪಂದ್ಯ

ಮಂಗಳವಾರ, 31 ಅಕ್ಟೋಬರ್ 2023 (08:40 IST)
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಸೋತು ಸುಣ್ಣವಾಗಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

ಎರಡೂ ತಂಡಗಳೂ ಈಗಾಗಲೇ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿವೆ. ಹೀಗಾಗಿ ಇಂದಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿರಲಿದೆ.

ಬಾಬರ್ ಪಡೆ ಕಳೆದ ನಾಲ್ಕು ಪಂದ್ಯಗಳಿಂದ ಸತತ ಸೋಲು ಕಂಡಿದೆ. ಇತ್ತ ಬಾಂಗ್ಲಾದೇಶ ಕೂಡಾ ಐದು ಪಂದ್ಯಗಳನ್ನು ಸೋತು ಸೆಮಿಫೈನಲ್ ಆಸೆ ಕಳೆದುಕೊಂಡಿದೆ. ಆದರೆ ಪಾಕಿಸ್ತಾನ ಇಂದು ಗೆದ್ದು ಅಗ್ರ 7 ರೊಳಗೆ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಯಾವುದೇ ತಂಡ ಅರ್ಹತೆ ಪಡೆಯಲು ಅಗ್ರ 7 ರೊಳಗೆ ಸ್ಥಾನ ಪಡೆಯಲೇಬೇಕು. ಇಂದಿನ ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ