ಡಕೌಟ್ ಆದ ಸಿಟ್ಟನ್ನು ವಿರಾಟ್ ಕೊಹ್ಲಿ ತೀರಿಸಿಕೊಂಡಿದ್ದು ಹೀಗೆ!
ಡೇವಿಡ್ ವಿಲ್ಲೆ ಎಸೆತದಲ್ಲಿ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿಯ 34 ನೇ ಮತ್ತು ವಿಶ್ವಕಪ್ ನಲ್ಲಿ ಮೊದಲ ಶೂನ್ಯ ಸಂಪಾದನೆಯಾಗಿತ್ತು.
ಶೂನ್ಯಕ್ಕೆ ಔಟಾದ ನಿರಾಸೆಯಲ್ಲಿ ಪೆವಿಲಿಯನ್ ಗೆ ಮರಳಿದ ಕೊಹ್ಲಿ ಸೋಫಾಗೆ ಗುದ್ದಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಒಂದೇ ಒಂದು ರನ್ ಗಳಿಸಲು ಸಾಧ‍್ಯವಾಗದೇ ಹೋಗಿದ್ದು ಕೊಹ್ಲಿಗೆ ತೀವ್ರ ನಿರಾಸೆ ಉಂಟು ಮಾಡಿತ್ತು. ಅವರ ಸಿಟ್ಟಿನ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.