ಏಕದಿನ ವಿಶ್ವಕಪ್: ಸೋತ ಪಾಕ್ ಮನೆಗೆ, ಸೆಮಿಫೈನಲ್ ತಂಡಗಳು ಹೀಗಿವೆ
ಪಾಕಿಸ್ತಾನ ನಿನ್ನೆ ಭಾರೀ ರನ್ ಅಂತರದಿಂದ ಗೆದ್ದು ರನ್ ರೇಟ್ ಗಳಿಸಬೇಕಿತ್ತು. ಆದರೆ ಅದರ ಬದಲು ಹೀನಾಯ ಸೋಲುಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪಾಕ್ 43.3 ಓವರ್ ಗಳಲ್ಲಿ 244 ರನ್ ಗಳಿಗೆ ಆಲೌಟ್ ಆಯಿತು. ಹೇಗಿದ್ದರೂ ಇಂಗ್ಲೆಂಡ್ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಜೊತೆಗೆ ಪಾಕ್ ತಂಡವನ್ನೂ ಹೊರದಬ್ಬಿದೆ.
ಇದೀಗ ಸೆಮಿಫೈನಲ್ ಗೆ ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅರ್ಹತೆ ಪಡೆದಿದೆ. ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಸೆಮಿಫೈನಲ್ ನಲ್ಲಿ ಎದುರಾಳಿಯಾದರೆ ಮತ್ತೊಂದು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ-ಆಫ್ರಿಕಾ ಸೆಣಸಾಡಲಿವೆ.