ಏಕದಿನ ವಿಶ್ವಕಪ್ ಕ್ರಿಕೆಟ್: ಭಾರತ-ನೆದರ್ಲ್ಯಾಂಡ್ಸ್ ಪಂದ್ಯಕ್ಕೆ ಹವಾಮಾನ ಹೇಗಿದೆ?
ಆದರೆ ಈ ಪಂದ್ಯಕ್ಕೆ ಮಳೆ ಭೀತಿಯೂ ಇಲ್ಲದಿಲ್ಲ. ಹವಾಮಾನ ವರದಿ ಪ್ರಕಾರ ಇಂದು ಅಪರಾಹ್ನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರುವ ಸಾಧ‍್ಯತೆಯಿದೆ. ಹಾಗಿದ್ದರೂ ಇಂದು ಬೆಳಿಗ್ಗೆ ಬಿಸಿಲಿನ ವಾತಾವರಣವಿರುವುದು ಸಮಾಧಾನಕರ ವಿಷಯ.
ಆದರೆ ಕಳೆದ ಎರಡು ದಿನಗಳಿಂದ ವರುಣ ಕೊಂಚ ಬಿಡುವು ನೀಡಿರುವುದು ಸಮಾಧಾನಕರ ವಿಚಾರ. ಒಂದು ವೇಳೆ ಮಳೆ ಬಂದರೆ ಇಲ್ಲಿ ಭಾರತ ಆಡುವ ವಿಶ್ವಕಪ್ ಪಂದ್ಯ ನೋಡುವ ಕಾತುರದಲ್ಲಿರುವ ಬೆಂಗಳೂರಿನ ಪ್ರೇಕ್ಷಕರಿಗೆ ತೀವ್ರ ನಿರಾಸೆಯಾಗಲಿದೆ.