ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಕಿವೀಸ್-ಆಫ್ರಿಕಾ ನಡುವೆ ಜಿದ್ದಾಜಿದ್ದಿನ ಪಂದ್ಯ
ದ.ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳೂ ಈ ಏಕದಿನ ವಿಶ್ವಕಪ್ ನಲ್ಲಿ ಸಮಾನ ಸಾಮರ್ಥ್ಯ ತೋರಿವೆ. ಆ ಪೈಕಿ ಕಿವೀಸ್ ಕಳೆದ ಎರಡು ಪಂದ್ಯಗಳನ್ನು ಕೂದಲೆಳೆಯಲ್ಲಿ ಸೋತು ಹತಾಶೆಯಲ್ಲಿದೆ. ಆಡಿದ 6 ಪಂದ್ಯಗಳಿಂದ 4 ಗೆಲುವು ಕಂಡಿರುವ ಕಿವೀಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇತ್ತ ದ.ಆಫ್ರಿಕಾ ಒಟ್ಟು ಆಡಿದ 6 ಪಂದ್ಯಗಳ ಪೈಕಿ ಸೋತಿದ್ದು ಕೇವಲ ಒಂದು ಪಂದ್ಯ ಮಾತ್ರ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿದ್ದರೂ ಆಫ್ರಿಕಾ ರನ್ ರೇಟ್ ಅತ್ಯುತ್ತಮವಾಗಿದೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಅದು ಪಡೆದ ಗೆಲುವಿನ ಅಂತರ ದೊಡ್ಡದು ಎಂದೇ ಹೇಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.