ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಪಂದ್ಯ: ಈಡನ್ ಗಾರ್ಡನ್ ನಲ್ಲಿ ಇರಲಿದೆ ಸರ್ಪೈಸ್!
ಕಾರಣ ಇದೇ ದಿನ ಕೋಲ್ಕೊತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ಜನ ಕಾಯುತ್ತಿದ್ದಾರೆ. ಈ ವಿಶೇಷ ದಿನದಂದು ಕೊಹ್ಲಿ ಶತಕ ಸಿಡಿಸುತ್ತಾರೆ ಎಂದು ಅನೇಕರು ಭರವಸೆಯಲ್ಲಿದ್ದಾರೆ.
ಇನ್ನು, ಈ ವಿಶೇಷ ದಿನಕ್ಕಾಗಿ ಕೋಲ್ಕೊತ್ತಾ ಈಡನ್ ಗಾರ್ಡನ್ ನಲ್ಲಿ ವಿಶೇಷ ತಯಾರಿ ನಡೆದಿದೆ. ವಿಶ್ವಕಪ್ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕೊಹ್ಲಿ ಮಾಸ್ಕ್ ವಿತರಿಸಲು ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಯೋಜನೆ ರೂಪಿಸಿದೆ. ಅಲ್ಲದೆ ಪಂದ್ಯಕ್ಕೆ ಮೊದಲು ಕೇಕ್ ಕಟ್ಟಿಂಗ್ ಮಾಡಿ ಕೊಹ್ಲಿಗೆ ಸನ್ಮಾನಿಸುವ ಕಾರ್ಯಕ್ರಮವಿರಲಿದೆ. ಅಂದು ಇಡೀ ಮೈದಾನ ಕೊಹ್ಲಿ ಮಾಸ್ಕ್ ತೊಟ್ಟು ಪಂದ್ಯ ವೀಕ್ಷಿಸಲಿದೆ!