ಏಕದಿನ ವಿಶ್ವಕಪ್: ಟೀಂ ಇಂಡಿಯಾಗೆ ಇಂದು ಅಫ್ಘಾನಿಸ್ತಾನ ಎದುರಾಳಿ
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯ ಟೀಂ ಇಂಡಿಯಾಗೆ ರನ್ ರೇಟ್ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಕಳೆದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಗರು ಕೈಕೊಟ್ಟಿದ್ದರು. ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಈ ಮೈದಾನದಲ್ಲಿ ಹೈ ಸ್ಕೋರ್ ನಿರೀಕ್ಷಿಸಬಹುದು. ಹೀಗಾಗಿ ಇಂದು ಟಾಪ್ ಆರ್ಡರ್ ಸಿಡಿಯುವ ನಿರೀಕ್ಷೆಯಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ.
ಇನ್ನು, ಅಫ್ಘಾನಿಸ್ತಾನ ತಂಡಕ್ಕೂ ಇದು ಎರಡನೆಯ ಪಂದ್ಯ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದ ತಂಡ ಇಂದೂ ಗೆಲ್ಲುವುದು ಕಷ್ಟವೇ. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗುವುದು.