ಏಕದಿನ ವಿಶ್ವಕಪ್ ಕೂಟದಲ್ಲಿಂದು ಎರಡು ಮಹತ್ವದ ಪಂದ್ಯ
ಆಸ್ಟ್ರೇಲಿಯಾಗೆ ಈಗ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಅತ್ತ ಸೋಲಿಲ್ಲದೇ ಮೆರೆಯುತ್ತಿದ್ದ ನ್ಯೂಜಿಲೆಂಡ್ ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಕಂಡ ಸೋಲನ್ನು ಮರೆತು ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ. ಈ ಪಂದ್ಯ ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದೆ.
ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ನಡುವೆ ಸಮಬಲದ ಕಾದಾಟ ನಡೆಯಲಿದೆ. ನೆದರ್ಲ್ಯಾಂಡ್ಸ್ ಈ ಕೂಟದಲ್ಲಿ ಅಲ್ಪಮಟ್ಟಿನ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿದೆ. ಆದರೆ ಬಾಂಗ್ಲಾದೇಶ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಹೆಚ್ಚು ಕಡಿಮೆ ಎರಡೂ ತಂಡಕ್ಕೆ ಮುಂದಿನ ಹಾದಿ ಕಷ್ಟವೇ. ಆದರೆ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೆಲುವು ಅನಿವಾರ್ಯ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವುದು.