ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಧೋನಿ!
ಈ ಐಪಿಎಲ್ ಆವೃತ್ತಿಯ ಪ್ಲೇ ಆಫ್ ಪಂದ್ಯದಲ್ಲಿ ಇಂದು ಚೆನ್ನೈ ತಂಡ ಹೈದರಾಬಾದ್ ಸನ್ ರೈಸರ್ಸ್ ತಂಡವನ್ನು ಎದುರಿಸಲಿದ್ದು, ಈ ಮಹತ್ವದ ಪಂದ್ಯಕ್ಕೂ ಮೊದಲು ಧೋನಿ ಅಭಿಮಾನಿಗಳಿಗೆ ನಿವೃತ್ತಿಯ ಶಾಕ್ ನೀಡಿದ್ದಾರೆ.
ತಾವೂ ಸೇರಿದಂತೆ ಕೆಲವು ಹಿರಿಯ ಆಟಗಾರರು ಬಹುಶಃ ಮುಂದಿನ ವರ್ಷದಿಂದ ಐಪಿಎಲ್ ಆಡುವುದು ಅನುಮಾನ ಎಂದು ಧೋನಿ ಹೇಳಿದ್ದಾರೆ. ಜತೆಗೆ ಸುದ್ದಿಗೋಷ್ಠಿಯಲ್ಲಿ ಚೆನ್ನೈ ತಂಡದೊಂದಿಗಿನ ತಮ್ಮ 10 ವರ್ಷಗಳ ಪಯಣವನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ಈ ಐಪಿಎಲ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಆಗುವುದು ಬಹುತೇಕ ಖಚಿತವಾಗಿದೆ. ಈ ಐಪಿಎಲ್ ನಲ್ಲಿ ಗೆಲುವಿನೊಂದಿಗೆ ವಿದಾಯ ಹೇಳುವುದು ಧೋನಿ ಕನಸು. ಆದರೆ ಧೋನಿ ಅಭಿಮಾನಿಗಳಿಗಂತೂ ಇದು ನಿಜಕ್ಕೂ ಶಾಕಿಂಗ್ ನ್ಯೂಸ್!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.