ಟೀಂ ಇಂಡಿಯಾ ಮುಂದಿನ ಕೋಚ್ ಆಯ್ಕೆಯಲ್ಲಿ ಧೋನಿಯ ಪಾತ್ರವೇನು

Krishnaveni K

ಮಂಗಳವಾರ, 21 ಮೇ 2024 (12:56 IST)
Photo Courtesy: Twitter
ಮುಂಬೈ: ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಧೋನಿ ಸಲಹೆ, ಸೂಚನೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.

ಧೋನಿ ಟೀಂ ಇಂಡಿಯಾದ ಯಶಸ್ವೀ ನಾಯಕರಾಗಿದ್ದವರು. ಹಿಂದೆ ಟಿ20 ವಿಶ್ವಕಪ್ ಟೂರ್ನಿ ವೇಳೆ ತಂಡದ ಸಲಹೆಗಾರನಾಗಿ ಜೊತೆಗಿದ್ದವರು. ತಂಡದ ಅನೇಕರಿಗೆ ಧೋನಿ ಮೇಲೆ ಅಪಾರ ಗೌರವವಿದೆ. ಇದೀಗ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲೂ ಬಿಸಿಸಿಐ ಧೋನಿ ಸಲಹೆ ಪಡೆಯಲಿದೆ ಎನ್ನಲಾಗಿದೆ.

ಟೀಂ ಇಂಡಿಯಾ ಮುಂದಿನ ಕೋಚ್ ಅಭ್ಯರ್ಥಿಯಾಗಿ ಸಿಎಸ್ ಕೆ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೆಸರು ಕೇಳಿಬರುತ್ತಿದೆ. ಇದೀಗ ಫ್ಲೆಮಿಂಗ್ ಜೊತೆ ಮಾತುಕತೆ ನಡೆಸಿ ಸಂಧಾನ ನಡೆಸಲು ಧೋನಿಯನ್ನೇ ಬಿಸಿಸಿಐ ಮುಂದೆ ಬಿಡಲು ತೀರ್ಮಾನಿಸಿದೆಯಂತೆ.

ಫ್ಲೆಮಿಂಗ್ ಗೆ ಧೋನಿ ಜೊತೆ ಉತ್ತಮ ಬಾಂಧವ್ಯವಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಚೆನ್ನೈ ತಂಡಕ್ಕೆ ಯಶಸ್ಸು ಸಿಕ್ಕಿದೆ. ಹೀಗಾಗಿ ಬಿಸಿಸಿಐ ಫ್ಲೆಮಿಂಗ್ ರನ್ನು ಟೀಂ ಇಂಡಿಯಾ ಕೋಚ್ ಆಗಿ ಕರೆತರಲು ಪ್ರಯತ್ನ ನಡೆಸಿದೆ. ಧೋನಿ ಹೇಳಿದರೆ ಫ್ಲೆಮಿಂಗ್ ಡೀಲ್ ಗೆ ಒಪ್ಪಬಹುದು ಎಂಬುದು ಬಿಸಿಸಿಐ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ