ಮಗಳ ಶಾಲೆ ಫೀಸ್ ಕೂಡಾ ಕಟ್ಟದೇ ಧೋನಿಗಾಗಿ 64,000 ರೂ. ವೆಚ್ಚ ಮಾಡಿದ ಹುಚ್ಚು ಅಭಿಮಾನಿ

Krishnaveni K

ಶನಿವಾರ, 13 ಏಪ್ರಿಲ್ 2024 (11:59 IST)
ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್ ಕೆ ನಾಯಕ ಧೋನಿಯನ್ನು ಇಷ್ಟಪಡುವ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಮಕ್ಕಳ ಶಾಲೆ ಫೀಸ್ ನ್ನೂ ಕಟ್ಟದೇ ಧೋನಿಗಾಗಿ 64,000 ರೂ. ಖರ್ಚು ಮಾಡಿದ್ದಾನೆ!

ಏಪ್ರಿಲ್ 8 ರಂದು ಸಿಎಸ್ ಕೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಯೊಬ್ಬ 64 ಸಾವಿರ ರೂ. ಖರ್ಚು ಮಾಡಿ ಬಂದಿದ್ದಾನೆ. ಆತ ಧೋನಿಯ ಕಟ್ಟಾ ಅಭಿಮಾನಿಯಂತೆ. ಹೀಗಾಗಿ ಒಮ್ಮೆ ತಲಾ ಆಡುವುದನ್ನು ನೋಡಬೇಕೆಂದು ಇಷ್ಟು ದುಬಾರಿ ಬೆಲೆ ಖರ್ಚು ಮಾಡಿದ್ದಾನೆ.

ಈ ಪಂದ್ಯ ವೀಕ್ಷಿಸಲು ಆತನಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಬ್ಲ್ಯಾಕ್ ನಲ್ಲಿ ತನಗೆ ಹಾಗೂ ತನ್ನ ಮೂವರು ಮಕ್ಕಳಿಗೆ 64,000 ವೆಚ್ಚ ಮಾಡಿ ಟಿಕೆಟ್ ಖರೀದಿಸಿದ್ದಾನೆ. ಇದರ ಬಗ್ಗೆ ಆತ ಮಾಧ‍್ಯಮಗಳೊಂದಿಗೆ ಹಂಚಿಕೊಂಡಿದ್ದು, ನಾನು ಮತ್ತು ಮಕ್ಕಳು ಧೋನಿ ಆಡುವುದನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಬೇಕು ಎಂದು ಆಸೆಪಟ್ಟಿದ್ದೆವು. ಅದೀಗ ನೆರವೇರಿದೆ. ನನ್ನ ಮಗಳ ಶಾಲೆ ಫೀಸ್ ಕೂಡಾ ಇನ್ನೂ ಕಟ್ಟಿಲ್ಲ ಎಂದು ಹೇಳಿಕೊಂಡಿದ್ದಾನೆ.

ಈ ಬಗ್ಗೆ ಆತನ ಮಕ್ಕಳೂ ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ. ಧೋನಿ ಆಡುವುದನ್ನು ಕಣ್ತುಂಬಿಕೊಳ್ಳಬೇಕಿತ್ತು. ನಮ್ಮ ಆಸೆ ಈಗ ನೆರವೇರಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಆತನ ಮಕ್ಕಳಲ್ಲಿ ಓರ್ವಳು ಹೇಳಿಕೊಂಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ