ಐಪಿಎಲ್ ಗೆ ಹರಾಜಿಗೆ ಮುನ್ನ ಚೆನ್ನೈಗೆ ಬಂದಿಳಿದ ಧೋನಿ

ಶುಕ್ರವಾರ, 28 ಜನವರಿ 2022 (09:09 IST)
ಚೆನ್ನೈ: ಐಪಿಎಲ್ 2022 ರ ಮೆಗಾ ಹರಾಜಿಗೆ ಇನ್ನು 10 ದಿನಗಳು ಬಾಕಿಯಿದ್ದು, ಇದಕ್ಕೂ ಮೊದಲೇ ಸಿಎಸ್ ಕೆ ನಾಯಕ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ.

ಫೆಬ್ರವರಿ 12,13 ರಂದು ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ತಂಡಕ್ಕೆ ಯಾವ ಆಟಗಾರರನ್ನು ಖರೀದಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮ್ಯಾನೇಜ್ ಮೆಂಟ್ ಜೊತೆಗೆ ಚರ್ಚಿಸಲು ಧೋನಿ ಚೆನ್ನೈಗೆ ಬಂದಿದ್ದಾರೆ.

ಧೋನಿ ಸಿಎಸ್ ಕೆ ತಂಡದ ಪ್ರಮುಖ ಅಂಗವಾಗಿದ್ದು, ತಂಡಕ್ಕೆ ಆಟಗಾರರ ಖರೀದಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಅವರು ವಾರಕ್ಕೂ ಮೊದಲೇ ಚೆನ್ನೈಗೆ ಬಂದಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ