ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಟೆಸ್ಟ್ ಪರೀಕ್ಷೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಿದ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಟೆಸ್ಟ್ ಮತ್ತು ಟಿ20 ರಿಂದ ನಿವೃತ್ತಿ ಹೊಂದಿರುವ ರೋಹಿತ್ ಈಗ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಏಕದಿನ ಸರಣಿ ಇರಲಿಲ್ಲ. ಹೀಗಾಗಿ ರೋಹಿತ್, ಕೊಹ್ಲಿ ಕಣಕ್ಕಿಳಿದೇ ಇರಲಿಲ್ಲ.
ಇದೀಗ ಕಮ್ ಬ್ಯಾಕ್ ಮಾಡಲು ರೋಹಿತ್ ಫಿಟ್ನೆಸ್ ಪರೀಕ್ಷೆಗೊಳಪಡಬೇಕಿದೆ. ಹೀಗಾಗಿ ರೋಹಿತ್ ಸದ್ಯದಲ್ಲೇ ಯೋ ಯೋ ಟೆಸ್ಟ್ ಗೊಳಪಡಲಿದ್ದಾರೆ ಎನ್ನಲಾಗಿದೆ. ಅವರ ಜೊತೆಗೆ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದಾರೆ. ಬುಮ್ರಾ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಇದಕ್ಕೆ ಮೊದಲು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಿದ್ದರು. ಆಗ ಅವರು ಗಾಯದ ಭೀತಿಯಿಂದ ಎಲ್ಲಾ ಪಂದ್ಯ ಆಡಿರಲಿಲ್ಲ. ಇದೀಗ ಅವರೂ ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದಾರೆ. ಅದಾದ ಬಳಿಕ ಏಷ್ಯಾ ಕಪ್ ಗೆ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.