ಕೊಹ್ಲಿಯಿಲ್ಲದ ಟೀಂ ಇಂಡಿಯಾಕ್ಕೆ ಸಮಾಧಾನ ತಂದ ಧೋನಿ
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಕೊಹ್ಲಿ ಯುವ ಆಟಗಾರ ಶಬ್ನಮ್ ಗಿಲ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ಕೊಹ್ಲಿ ಸ್ಥಾನಕ್ಕೆ ಗಿಲ್ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಹಂಗಾಮಿ ನಾಯಕ ರೋಹಿತ್ ಶರ್ಮಾಗೆ ವೈಯಕ್ತಿಕವಾಗಿಯೂ ಇದು ವಿಶೇಷ ಪಂದ್ಯ. ಇದು ಅವರ 200 ನೇ ಏಕದಿನ ಪಂದ್ಯವಾಗಿದ್ದು, ಈ ಮೂಲಕ ಭಾರತದ ಪರ 200 ಪ್ಲಸ್ ಏಕದಿನ ಪಂದ್ಯವಾಡಿದ 14 ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.