ಆರ್ ಸಿಬಿ ವಿರುದ್ಧ ಸೋಲಿನ ಬಳಿಕ ಜಡೇಜಾ ಜೊತೆ ಬಾರ್ ನಲ್ಲಿ ಕೂತಿದ್ದ ಧೋನಿ

Krishnaveni K

ಮಂಗಳವಾರ, 21 ಮೇ 2024 (09:52 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋತು ಕೂಟದಿಂದ ನಿರ್ಗಮಿಸಿದ ಬಳಿಕ ಧೋನಿ ನೇರವಾಗಿ ಹೋಗಿದ್ದು ಬಾರ್ ಗೆ. ಅದೂ ಸಿಎಸ್ ಕೆ ಜೆರ್ಸಿಯಲ್ಲೇ ಬಾರ್ ನಲ್ಲಿ ಕೂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ನೇಹಿತ, ಸಹ ಕ್ರಿಕೆಟಿಗ ರವೀಂದ್ರ ಜಡೇಜಾ ಜೊತೆಗೆ ಧೋನಿ ಬಾರ್ ಒಂದರಲ್ಲಿ ಕುಳಿತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಐಪಿಎಲ್ ನಲ್ಲಿ ಧೋನಿ ನೋವಿನ ನಡುವೆಯೂ ಆಡಿದ್ದರು. 42 ವರ್ಷದ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಿರಲೂ ಬಹುದು.

ಹೀಗಾಗಿ ಸಿಎಸ್ ಕೆ ಪ್ಲೇ ಆಫ್ ನಲ್ಲಿ ಸೋತಿದ್ದು ಧೋನಿ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಬೇಸರವುಂಟು ಮಾಡಿತ್ತು. ಸಿಎಸ್ ಕೆ ಸೋಲಿನ ಸಂದರ್ಭದಲ್ಲಿ ಧೋನಿ ತೀವ್ರ ಬೇಸರದಲ್ಲಿ ಡಗೌಟ್ ನಲ್ಲಿ ಕುಳಿತಿದ್ದರು. ಇದೀಗ ಧೋನಿ ಅದೇ ಬೇಸರ ಕಳೆಯಲು ಬಾರ್ ಗೆ ಹೋಗಿರಬಹುದು ಎಂದು ನೆಟ್ಟಿಗರು ಲೆಕ್ಕಾಚಾರ ಹಾಕಿದ್ದಾರೆ.

ಧೋನಿ ಮತ್ತು ಜಡೇಜಾ ಇಬ್ಬರೂ ಬಾರ್ ನಲ್ಲಿ ಮದ್ಯದ ಬಾಟಲಿಯ ಮುಂದೆ ಕುಳಿತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂದ್ಯದ ಬಳಿಕ ಹಳದಿ ಜೆರ್ಸಿಯಲ್ಲೇ ಇಬ್ಬರೂ ಬಾರ್ ಗೆ ಹೋಗಿ ಕೂತಿದ್ದಾರೆಂಬುದು ಸ್ಪಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ