ಎಲ್ಲರ ಎದುರೇ ಅಶ್ಲೀಲ ವರ್ತನೆ: ಗಿಲ್ ಗೆ ಸಿಟ್ಟು ತರಿಸಿದ ಕ್ರಿಕೆಟಿಗ ಯಾರು ಗೊತ್ತಾ?
ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಾಕಷ್ಟು ಸಂಖ್ಯೆಯಲ್ಲಿ ಜನ ಟೀಂ ಇಂಡಿಯಾ ಕ್ರಿಕೆಟಿಗರನ್ನು ನೋಡಲು ನೆರೆದಿದ್ದರು. ಬಸ್ ಏರುವ ಮುನ್ನ ಗಿಲ್ ಫೋನ್ ಹಿಡಿದುಕೊಂಡು ಯಾರಿಗೋ ಕಾದು ನಿಂತಿದ್ದರೆ ಇತ್ತ ಸಹ ಕ್ರಿಕೆಟಿಗ, ಸ್ನೇಹಿತ ಇಶಾನ್ ಕಿಶನ್ ಮುಟ್ಟಬಾರದ ಜಾಗದಲ್ಲಿ ಕೈ ಹಾಕಲು ಹೋಗಿ ಗಿಲ್ ಕೋಪಕ್ಕೆ ಗುರಿಯಾಗಿದ್ದಾರೆ.
ಇಶಾನ್ ವರ್ತನೆಗೆ ಸಿಟ್ಟಿಗೆದ್ದಂತೆ ಕಂಡುಬಂದ ಗಿಲ್ ಅತ್ತ ನಡೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಶಾನ್ ಮತ್ತು ಗಿಲ್ ಅತ್ಯುತ್ತಮ ಸ್ನೇಹಿತರು. ಇಬ್ಬರೂ ಈ ರೀತಿ ಕೀಟಲೆ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಇಶಾನ್ ಸಾರ್ವಜನಿಕವಾಗಿ ಈ ರೀತಿ ಕೀಟಲೆ ಮಾಡಿದ್ದು ಗಿಲ್ ಗೆ ಇಷ್ಟವಾದಂತಿರಲಿಲ್ಲ.