ಟಿ20 ವಿಶ್ವಕಪ್ ತಂಡದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ಈಗ ಕಾಮೆಂಟೇಟರ್!

ಶನಿವಾರ, 19 ನವೆಂಬರ್ 2022 (09:00 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ ಈಗ ಕಾಮೆಂಟೇಟರ್ ಆಗಿ ಕೆಲಸ ಮಾಡಿದ್ದಾರೆ.

ಟೀಂ ಇಂಡಿಯಾದಿಂದ ಕೆಲವು ಕಾಲ ಕಡೆಗಣಿಸಲ್ಪಟ್ಟಾಗ ದಿನೇಶ್ ಕಾಮೆಂಟೇಟರ್ ಆಗಿ ಕೆಲಸ ಮಾಡಿದ್ದರು. ಐಪಿಎಲ್ ನಲ್ಲಿ ಕ್ಲಿಕ್ ಆಗಿ ಟೀಂ ಇಂಡಿಯಾಕ್ಕೆ ಬಂದ ಮೇಲೆ ಆಟಗಾರನಾದರು.

ಇದೀಗ ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆ ಟಿ20 ಸರಣಿ ಆಡುತ್ತಿದೆ. ಈ ಸರಣಿಯಿಂದ ದಿನೇಶ್ ಕಾರ್ತಿಕ್ ಹೊರಗುಳಿದಿದ್ದಾರೆ. ಆದರೆ ಪಂದ್ಯಕ್ಕೆ ಮೊದಲು ನಡೆಯುವ ತಜ್ಞರ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ದಿನೇಶ್ ಕಾರ್ತಿಕ್ ಕೂಡಾ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಇಲ್ಲದೇ ಇದ್ದಾಗ ಕಾಮೆಂಟರಿ ಎಂದು 37 ರ ದಿನೇಶ್ ಫುಲ್ ಬ್ಯುಸಿಯಾಗಿದ್ದಾರೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ