ಭಾರತ-ನ್ಯೂಜಿಲೆಂಡ್ ಟಿ20 ಸರಣಿ: ಹಾರ್ದಿಕ್ ನೇತೃತ್ವದಲ್ಲಿ ಹೊಸ ತಂಡ ಕಣಕ್ಕೆ

ಶುಕ್ರವಾರ, 18 ನವೆಂಬರ್ 2022 (08:40 IST)
Photo Courtesy: Twitter
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಅನುಭವಿಗಳ ಗೈರಿನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಮೊದಲು ಹಾರ್ದಿಕ್ ಎರಡು ಬಾರಿ ಟಿ20 ಮಾದರಿಯಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಎರಡೂ ಬಾರಿಯೂ ಭಾರತ ದಿಗ್ವಿಜಯ ಸಾಧಿಸಿದೆ.

ಇಂದಿನ ಪಂದ್ಯದಲ್ಲಿ ಹಾರ್ದಿಕ್ ಗೆ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್ ರಂತಹ ಪ್ರತಿಭಾವಂತರ ಸಾಥ್ ಸಿಗಲಿದೆ. ಬೌಲಿಂಗ್ ನಲ್ಲಿ ಮತ್ತೆ ಅರ್ಷ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮುಂಚೂಣಿ ಬೌಲರ್ ಗಳಾಗಲಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಬೆಂಚ್ ಕಾಯಿಸಿದ್ದ ಯಜುವೇಂದ್ರ ಚಾಹಲ್ ಇಲ್ಲಿ ಅವಕಾಶ ಪಡೆಯಲಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ