ನಾಯಕನಾದ ಒಂದೇ ವರ್ಷಕ್ಕೆ ರೋಹಿತ್ ಶರ್ಮಾಗೂ ಕೊಹ್ಲಿಯದ್ದೇ ಗತಿ?
ಕೊಹ್ಲಿಯಿಂದ ನಾಯಕತ್ವ ಹಿಂಪಡೆದು ರೋಹಿತ್ ಗೆ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿ ಒಂದು ವರ್ಷವಾಗಿದೆಯಷ್ಟೇ. ಆದರೆ ನಾಯಕರಾಗಿ ರೋಹಿತ್ ಸಾಧನೆ ಅಷ್ಟಕ್ಕಷ್ಟೇ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ನಲ್ಲಿ ಎರಡರಲ್ಲೂ ಟೀಂ ಇಂಡಿಯಾ ವಿಫಲವಾಗಿದೆ.
ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಭವಿಷ್ಯದ ನಿಟ್ಟಿನಲ್ಲಿ ರೋಹಿತ್ ಗೆ ಹಿಂಬಡ್ತಿ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿಯೇ ಮುಂದಿನ ದಿನಗಳಲ್ಲಿ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟುವ ಸಾಧ‍್ಯತೆಯಿದೆ. ಹಂತ ಹಂತವಾಗಿ ರೋಹಿತ್ ರಿಂದ ಎಲ್ಲಾ ಮಾದರಿಯ ನಾಯಕತ್ವ ಹಿಂಪಡೆಯುವ ಸಾಧ್ಯತೆಯಿದೆ.