ಟಿ20 ವಿಶ್ವಕಪ್ ಸೋಲಿನ ಬಳಿಕ ಭಾರತ-ಪಾಕ್ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾ ವಾರ್

ಮಂಗಳವಾರ, 15 ನವೆಂಬರ್ 2022 (08:50 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರತ-ಪಾಕ್ ಯುದ್ಧ ನಡೆಯುತ್ತಿದೆ!

ವಿಶ್ವಕಪ್ ಫೈನಲ್ ನಡೆದು ಎರಡು ದಿನ ಕಳೆದರೂ ಸೋಷಿಯಲ್ ಮೀಡಿಯಾದಲ್ಲಿ ಉಭಯ ದೇಶಗಳ ಕ್ರಿಕೆಟ್ ಪ್ರೇಮಿಗಳ ನಡುವಿನ ಕೆಸರೆರಚಾಟ ನಿಂತಿಲ್ಲ. ಭಾರತ ಸೆಮಿಫೈನಲ್ ನಲ್ಲಿ ಸೋತಿದ್ದಾಗ ಪಾಕ್ ಮಾಜಿ ಕ್ರಿಕೆಟಿಗರು ವ್ಯಂಗ್ಯ ಮಾಡಿದ್ದರು. ಸಮಯಕ್ಕಾಗಿ ಕಾಯುತ್ತಿದ್ದ ಭಾರತೀಯ ಕ್ರಿಕೆಟಿಗರು, ಅಭಿಮಾನಿಗಳು ಈಗ ಪಾಕ್ ಮೇಲೆ ತಿರುಗು ಬಾಣ ಬಿಡುತ್ತಿದ್ದಾರೆ.

ಇದೆಲ್ಲಾ ಕರ್ಮ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಮೊಹಮ್ಮದ್ ಶಮಿ ತಿರುಗೇಟು ಕೊಟ್ಟಿದ್ದರು. ಇದರ ಬೆನ್ನಲ್ಲೇ ಪಾಕ್ ಅಭಿಮಾನಿಗಳು ಶಮಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಭಾರತೀಯರೂ ತಿರುಗೇಟು ನೀಡುತ್ತಿದ್ದು ಮೆಮೆಗಳ ಮೂಲಕ ಪಾಕ್ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿದ್ದಾರೆ. ವಿಶೇಷವೆಂದರೆ ಫೈನಲ್ ಗೆದ್ದ ಇಂಗ್ಲೆಂಡ್ ಮಾತ್ರ ಸುಮ್ಮನಿದೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ