ಐದನೇ ಟೆಸ್ಟ್ ರದ್ದು ಮಾಡಲು ಐಪಿಎಲ್ ಕಾರಣ ಆರೋಪಕ್ಕೆ ಇಸಿಬಿ ಪ್ರತಿಕ್ರಿಯೆ

ಶನಿವಾರ, 11 ಸೆಪ್ಟಂಬರ್ 2021 (09:38 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಿನ್ನೆಯಿಂದ ಆರಂಭವಾಗಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ಕೊರೋನಾ ನೆಪದಿಂದ ದಿಡೀರ್ ಆಗಿ ರದ್ದು ಮಾಡಿರುವುದರ ಹಿಂದೆ ಐಪಿಎಲ್ ಪ್ರಭಾವವಿದೆ ಎಂಬ ಆರೋಪಕ್ಕೆ ಇಸಿಬಿ ಪ್ರತಿಕ್ರಿಯಿಸಿದೆ.


ಐಪಿಎಲ್ ಆರಂಭವಾಗಲು ಇನ್ನೇನು ವಾರ ಬಾಕಿಯಿದೆ. ಹೀಗಾಗಿ ಈ ಶ್ರೀಮಂತ ಕ್ರಿಕೆಟ್ ಲೀಗ್ ಲಾಬಿಯಿಂದ ಐದನೇ ಟೆಸ್ಟ್ ನ್ನು ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಗೆ ಸಮಯಾವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಂದ್ಯ ರದ್ದು ಮಾಡಲಾಗಿಲ್ಲ. ಆಟಗಾರರು ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಪಂದ್ಯ ರದ್ದು ಮಾಡಲಾಗಿದೆ. ಇದರಲ್ಲಿ ಬಿಸಿಸಿಐ ಪಾತ್ರವಿಲ್ಲ’ ಎಂದು ಇಸಿಬಿ ಸ್ಪಷ್ಟಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ