ರಾಜ್ಯದಲ್ಲಿ ಇನ್ನು ಮದುವೆಯಾಗಬೇಕಿದ್ದರೆ ಈ ನಿಯಮ ಪಾಲಿಸಲೇಬೇಕು!

ಶನಿವಾರ, 16 ಮೇ 2020 (09:12 IST)
ಬೆಂಗಳೂರು: ಕೊರೋನಾದಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿದೆ. ಅಷ್ಟೇಕೆ ಮದುವೆ ಸಮಾರಂಭಗಳಿಗೂ ಕೊರೋನಾ ಭೀತಿ ತಟ್ಟಿದೆ.


ಮೇ 17 ರ ನಂತರ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದ್ದು, ರಾಜ್ಯ ಸರ್ಕಾರ ಮದುವೆ ಸಮಾರಂಭಗಳಿಗೆ ಪ್ರತ್ಯೇಕ ನಿಯಮ ರೂಪಿಸಿದೆ.

ಇದುವರೆಗೆ ಆಯಾ ಜಿಲ್ಲಾಧಿಕಾರಿಗಳ ಒಪ್ಪಿಗೆಯೊಂದಿಗೆ ಗರಿಷ್ಠ 20 ಮಂದಿಗೆ ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವಿತ್ತು. ಅದೀಗ ಕೊಂಚ ಏರಿಕೆಯಾಗಿದ್ದು, ಇನ್ನು ಮುಂದೆ 50 ಮಂದಿಗೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಬಹುದಾಗಿದೆ.

ಆದರೆ ಮದುವೆ ಎಂದು ತುಂಡು-ಗುಂಡು ಎಲ್ಲಾ ಇಟ್ಟು ಪಾರ್ಟಿ ಮಾಡೋ ಹಾಗಿಲ್ಲ. ಮದುವೆ ಸಮಾರಂಭಕ್ಕೆ ಆಗಮಿಸುವ ಎಲ್ಲರೂ ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ಹೊಂದಿರಬೇಕು. ಮದುವೆಗೆ ಬರುವ ಅತಿಥಿಗಳ ಥರ್ಮಲ್ ಸ್ಕ್ರೀನಿಂಗ್ ಗೊಳಪಡಿಸಬೇಕು.

ಅಷ್ಟೇ ಅಲ್ಲ ಮದುವೆಗೆ 10 ವರ್ಷದೊಳಗಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಬರುವಂತಿಲ್ಲ. ಮದುವೆಯಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಷ್ಟೆಲ್ಲಾ ನಿಯಮ ಪಾಲಿಸಿಯೇ ಇನ್ನು ಮುಂದಿನ ಆದೇಶದವರೆಗೆ ಮದುವೆ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ