ಪ್ರಯೋಗ ಮಾಡಿ ಸೋತ ಇಂಗ್ಲೆಂಡ್: ಆಸೀಸ್ ಗೆ ಆಶಸ್ ನಲ್ಲಿ ಮೊದಲ ಗೆಲುವು

ಬುಧವಾರ, 21 ಜೂನ್ 2023 (08:20 IST)
ಬರ್ಮಿಂಗ್ ಹ್ಯಾಮ್: ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ರೋಚಕವಾಗಿ 2 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಮೊದಲ ದಿನವೇ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದಕ್ಕೆ ಉತ್ತರವಾಗಿ ಆಸೀಸ್ 386 ರನ್ ಗೆ ಆಲೌಟ್ ಆಗಿತ್ತು. ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಇಂಗ್ಲೆಂಡ್ 273 ರನ್ ಗಳಿಗೆ ಆಲೌಟ್ ಆಯಿತು.

ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಬಳಿಕ ನಾಯಕ ಪ್ಯಾಟ್ ಕ್ಯುಮಿನ್ಸ್ ತಾಳ್ಮೆಯ ಆಟ ಪ್ರದರ್ಶಿಸಿ ಅಜೇಯ 40 ರನ್ ಗಳಿಸಿ ತಂಡಕ್ಕೆ ಅಸಾಧ‍್ಯ ಗೆಲುವು ತಂದಿತ್ತರು. ಅವರಿಗೆ ತಕ್ಕ ಸಾಥ್ ನೀಡಿದ ನಥನ್ ಲಿಯೊನ್ ಔಟಾಗದೇ 16 ರನ್ ಗಳಿಸಿದರು. ಇದಕ್ಕೆ ಮೊದಲು ಆರಂಭಿಕ ಉಸ್ಮಾನ್ ಖವಾಜ 65 ರನ್ ಗಳಿಸಿದ್ದರು. ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ ಡಿಕ್ಲೇರ್ ಮಾಡಿ ಪ್ರಯೋಗಕ್ಕೆ ಮುಂದಾದ ಇಂಗ್ಲೆಂಡ್‍ ಕೈ ಸುಟ್ಟುಕೊಂಡಿತು. ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಗೆಲುವು ಕಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ