ಇಂಗ್ಲೆಂಡ್ ಮತ್ತು ಪಾಕಿಸ್ತಾನದ ನಡುವೆ ಬರ್ಮಿಂಗ್‌ಹ್ಯಾಮ್ ಎಡ್ಗ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಕಳೆದ ಟೆಸ್ಟ್ ಪಂದ್ಯದಲ್ಲಿ ರೂಟ್ ಮತ್ತು ಕುಕ್ ಅವರ ಉತ್ತಮ ಜತೆಯಾಟದಿಂದ ಇಂಗ್ಲೆಂಡ್ ಬೃಹತ್ ಸ್ಕೋರನ್ನು ದಾಖಲಿಸಿತ್ತು. ಈ ಬಾರಿ ರೂಟ್ ಮತ್ತು ಕುಕ್ ಇಬ್ಬರನ್ನು ಪಾಕ್ ಬೌಲರುಗಳು ಔಟ್ ಮಾಡಿದ್ದು, ಇಂಗ್ಲೆಂಡ್ ಮುಂದೆ ಹೇಗೆ ಆಡಲಿದೆ ಎನ್ನುವುದೇ ಕುತೂಹಲ ಕೆರಳಿಸಿದೆ.
ಜೋಯ್ ರೂಟ್ ಸೊಹೇಲ್ ಖಾನ್ ಬೌಲಿಂಗ್‌ನಲ್ಲಿ ಹಫೀಜ್‌ಗೆ ಕ್ಯಾಚಿತ್ತು ಔಟಾದರು ಮತ್ತು ಅಲಸ್ಟೈರ್ ಕುಕ್ ಅವರು ರಾಹತ್ ಅಲಿಗೆ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಕುಕ್ ಅವರು 52 ಎಸೆತಗಳಲ್ಲಿ 45 ರನ್ ಸ್ಕೋರ್ ಮಾಡಿದ್ದು, ಅವರ ಸ್ಕೋರಿನಲ್ಲಿ 8 ಬೌಂಡರಿಗಳಿವೆ. ರೂಟ್ ಕೇವಲ 3 ರನ್‌ಗೆ ಔಟಾದರು.