ಆಸ್ಟ್ರೇಲಿಯಾ ವಿರುದ್ಧ ಸೋತ ಇಂಗ್ಲೆಂಡ್ ಗೆ ಚಾಂಪಿಯನ್ಸ್ ಟ್ರೋಫಿ ಎಂಟ್ರಿಯೂ ಕಷ್ಟ
ಇಂಗ್ಲೆಂಡ್ ಹೇಗಿದ್ದರೂ ಈ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೇರುವ ಸಾಧ್ಯತೆಯಿಲ್ಲ. ಆದರೆ ಅಂಕಪಟ್ಟಿಯಲ್ಲಿ ಸದ್ಯಕ್ಕೆ 10 ನೇ ಸ್ಥಾನದಲ್ಲಿರುವ ಇಂಗ್ಲೆಂಡ್ 7 ರೊಳಗೆ ಸ್ಥಾನ ಪಡೆಯಲು ಪ್ರಯತ್ನ ನಡೆಸಲಬೇಕಿದೆ.
ಅಗ್ರ 7 ತಂಡಗಳಿಗೆ ಮಾತ್ರ 2025 ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಹೀಗಾಗಿ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಈ ವಿಶ್ವಕಪ್ ಕೂಟದಲ್ಲಿ ಉಳಿದಿರುವ ಎಲ್ಲಾ ಎರಡು ಲೀಗ್ ಪಂದ್ಯಗಳಲ್ಲೂ ಜಯ ಗಳಿಸಲಬೇಕಿದೆ.