ವಿರಾಟ್ ಕೊಹ್ಲಿಗೆ ಚುಂಬಿಸಲು ಮೈದಾನಕ್ಕೇ ಓಡಿ ಬಂದ ಅಭಿಮಾನಿ

ಶನಿವಾರ, 13 ಅಕ್ಟೋಬರ್ 2018 (09:22 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜತೆ ಸೆಲ್ಫೀ ತೆಗೆಸಿಕೊಳ್ಳಲು ಮೈದಾನಕ್ಕೇ ಇಬ್ಬರು ಅಭಿಮಾನಿ ಯುವಕರು ಓಡಿ ಬಂದ ಘಟನೆ ಬೆನ್ನಲ್ಲೇ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ.

ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಕೊಹ್ಲಿಗೆ ಚುಂಬಿಸಿ, ಸೆಲ್ಫೀ ತೆಗೆಯಲು ಮೈದಾನಕ್ಕೇ ಅಭಿಮಾನಿಯೊಬ್ಬ ನುಗ್ಗಿದ್ದಾನೆ.

ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಈತ ಮುಂದಾಗುತ್ತಿದ್ದಂತೆ ಓಡಿ ಬಂದ ಭದ್ರತಾ ಸಿಬ್ಬಂದಿಗಳು ಆತನನ್ನು ಎಳೆದು ಹೊರಗೊಯ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ