ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದುರಾದೃಷ್ಟವಂತನಾದ ಶ್ರಾದ್ಧೂಲ್ ಠಾಕೂರ್
ಮೊದಲ ಟೆಸ್ಟ್ ನಲ್ಲಿ ಆಡುವ ಉತ್ಸಾಹದಲ್ಲಿದ್ದ ಯುವ ವೇಗಿಗೆ ಕೇವಲ 10 ಎಸೆತ ಎಸೆಯುವಷ್ಟರಲ್ಲಿ ಗಾಯ ವಕ್ಕರಿಸಿಕೊಂಡಿದೆ. ಇದರಿಂದಾಗಿ ಮೈದಾನದಿಂದ ಹೊರಗುಳಿಯಬೇಕಾಯಿತು.
ಬೌಲಿಂಗ್ ನಡುವೆ ತೀವ್ರ ತೊಡೆ ನೋವಿಗೆ ತುತ್ತಾದ ಶ್ರಾದ್ಧೂಲ್ ಫಿಸಿಯೋ ನೆರವಿನಿಂದ ಪೆವಿಲಿಯನ್ ಗೆ ಮರಳಿದರು. ಬಳಿಕ ರವಿಚಂದ್ರನ್ ಅಶ್ವಿನ್ ಶ್ರಾದ್ಧೂಲ್ ಓವರ್ ಪೂರ್ತಿಗೊಳಿಸಿದರು.