ಕ್ರಿಕೆಟ್ ತಂಡಕ್ಕೆ ಟೆನಿಸ್ ತಾರೆ ಸಾನಿಯಾ ಯಾಕೆ? ಆರ್ ಸಿಬಿ ನಡೆಗೆ ಟ್ರೋಲ್
ಸಾಮಾನ್ಯವಾಗಿ ಕ್ರಿಕೆಟ್ ತಂಡದ ಮೆಂಟರ್ ಆಗಿ ಕ್ರಿಕೆಟಿಗರನ್ನೇ ಆಯ್ಕೆ ಮಾಡಲಾಗುತ್ತದೆ. ಆದರೆ ಟೆನಿಸ್ ತಾರೆಯಾಗಿರುವ ಸಾನಿಯಾರನ್ನು ಆಯ್ಕೆ ಮಾಡಿರುವ ಆರ್ ಸಿಬಿ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕೆಲವರು ಈ ನಡೆಯನ್ನು ಟೀಕಿಸಿದ್ದಾರೆ. ಸಾನಿಯಾಗೂ ಕ್ರಿಕೆಟ್ ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಟೆನಿಸ್ ನಲ್ಲಿ ಸಾನಿಯಾ ಲೆಜೆಂಡ್ ಆಗಿರಬಹುದು ಆದರೆ ಕ್ರಿಕೆಟ್ ನಲ್ಲಿ ಅವರು ಏನು ಗೈಡ್ ಮಾಡಲು ಸಾಧ‍್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಕೆಲವರು ಈ ಅಚ್ಚರಿಯ ನಡೆಯನ್ನು ಸಮರ್ಥಿಸಿದ್ದು, ಇದು ನಿಜಕ್ಕೂ ಅದ್ಭುತ ನಿರ್ಧಾರ. ಸಾನಿಯಾ ಕೇವಲ ಮೆಂಟರ್ ಅಷ್ಟೇ. ಕೋಚ್ ಅಲ್ಲ ಎಂದು ಸಮರ್ಥಿಸಿದ್ದಾರೆ.