ವಿಚ್ಛೇದನ ವದಂತಿ ಬೆನ್ನಲ್ಲೇ ಸಾನಿಯಾಗೆ ಶೊಯೇಬ್ ಸಂದೇಶ

ಮಂಗಳವಾರ, 15 ನವೆಂಬರ್ 2022 (11:09 IST)
Photo Courtesy: Twitter
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ-ಶೊಯೇಬ್ ಮಲಿಕ್ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು.

ಇಂದು ಸಾನಿಯಾ ಜನ್ಮದಿನವಾಗಿದ್ದು, ಶೊಯೇಬ್ ಪತ್ನಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿ ತಮ್ಮಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಸಂದೇಶ ಕೊಟ್ಟಿದ್ದಾರೆ.

‘ಹ್ಯಾಪೀ ಬರ್ತ್ ಡೇ ಸಾನಿಯಾ. ಉತ್ತಮ ಆರೋಗ್ಯ, ಖುಷಿ ನಿನ್ನದಾಗಲಿ.  ಈ ದಿನವನ್ನು ಎಂಜಾಯ್ ಮಾಡು’ ಎಂದು ಸಾನಿಯಾ ಜೊತೆಗಿನ ಆತ್ಮೀಯ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು ದಂಪತಿ ತಾವಿಬ್ಬರೂ ಜೊತೆಯಾಗಿ ನಡೆಸಿಕೊಡಲಿರುವ ಟಾಕ್ ಶೋ ಒಂದನ್ನು ಘೋಷಣೆ ಮಾಡಿದ್ದರು. ಆ ಮೂಲಕ ವಿಚ್ಛೇದನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ